ಮತ್ತೆ ಬಂದಿದೆ ಯುಗಾದಿ…

ಎರಡು ವರ್ಷದ ಹಿಂದೆ, ನಾನು ಮೊದಲ ಬಾರಿ ಯುಗಾದಿಯ ಸಡಗರ ತಪ್ಪಿಸಿಕೊಂಡಾಗ ಬರೆದಿದ್ದು. ಈ ವರ್ಷ ಕೂಡ ಅಂದಿನಂತೆ ಹಿಂದಿನ ದಿನಗಳ ಮೆಲುಕು ಹಾಕುತ್ತಲೆ ಹಬ್ಬದ ಅಚರಣೆ. ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ ಬೇಂದ್ರೆಯವರ ಈ ಸಾಲುಗಳು ಕಿವಿಗೆ ಬೀಳದೆ ಬೆಳಗಾಗದ ಯುಗಾದಿ ಹಬ್ಬದ ದಿನವೇ ಇಲ್ಲ. ಪರೀಕ್ಷೆಗೂ ಸಹ ಬೆಳಗ್ಗೆ ಬೇಗ ಏಳದವನು, ಈ ದಿನದಂದು ಎದ್ದು ಕುಳಿತು ಬಕಪಕ್ಷಿಯಂತೆ ಈ ಹಾಡನ್ನು ರೇಡಿಯೋದಲ್ಲಿ ಬರುವ ತನಕ ಅಲ್ಲಾಡದಂತೆ ಕೂರಲಿಲ್ಲವೆಂದರೆ ಯುಗಾದಿ ಶುರುವಾಗುತ್ತಲೇ ಇರಲಿಲ್ಲ. ಹಾಡು ಕೇಳಿ, ಮುಗಿಯುವ ತನಕ ಕೊನೆಸಾಲಿನವರೆಗೂ ಜೊತೆಗೆ ಹಾಡಿದ ನಂತರವೇ ಎಣ್ಣೆ ಸ್ನಾನದ ತಯಾರಿ. ಕುಲವಧು ಚಿತ್ರದ ಹಾಡು, ಮಾವಿನ ತೋರಣ, ಅಭ್ಯಂಜನ, ಬೇವು-ಬೆಲ್ಲ, ಬೇಳೆ ಒಬ್ಬಟ್ಟು – ಇಷ್ಟರಲ್ಲಿ ಯಾವುದೂ ತಪ್ಪುವಂತಿಲ್ಲ. ಪ್ರತಿ ವರ್ಷ ಹೋಳಿಗೆ ತಯಾರಿ ಮತ್ತು ತಿನ್ನುವಾಗ ’ಹೋಳಿಗೆ ಮಾಮ’ನ ಪ್ರಸಂಗವನ್ನು ನೆನೆಯಲೇ ಬೇಕು, ಅದೂ ಕೂಡ ತಪ್ಪುವಂತಿಲ್ಲ. ’ಹೋಳಿಗೆ ಮಾಮ’, ಅವರ ನಿಜವಾದ ಹೆಸರಲ್ಲ. ಅವರ ಹೆಸರೂ ನನಗೆ ಗೊತ್ತಿಲ್ಲ. […]

Continue readingMore Tag
Scroll to top